ಆತ್ಮೀಯ ಪೋಷಕರೆ,
ನಿಮಗೆಲ್ಲರಿಗೂ ಶುಭಾಶಯಗಳು!
ತಮ್ಮಲ್ಲಿ ಬಹಳಷ್ಟು ಜನ ಜುಲೈ, ಆಗಸ್ಟ್, ಮತ್ತು ಸೆಪ್ಟೆಂಬರ್ ತಿಂಗಳ ಶಾಲಾ ಶುಲ್ಕವನ್ನು ಪಾವತಿಸಿರುವುದಿಲ್ಲ.
ನಾವು ನಮ್ಮ ಶಾಲೆಯ ವೆಚ್ಚಗಳು ಮತ್ತು ಶಿಕ್ಷಕರ ಸಂಬಳಗಳನ್ನು ವ್ಯವಸ್ಥೆ ಮಾಡಲು ಕಷ್ಟವೆಂದು ಭಾಸವಾಗುತ್ತಿದೆ.
ಆದ ಕಾರಣ ದಯವಿಟ್ಟು ಅಕ್ಟೋಬರ್ 31ರ ಒಳಗಾಗಿ ತಾವು ತಮ್ಮ ಮಕ್ಕಳ ಶುಲ್ಕವನ್ನು ಪಾವತಿಸಬೇಕೆಂದು ನಾವು ತಮ್ಮಲ್ಲಿ ವಿನಂತಿಸುತ್ತೇವೆ. ಇಲ್ಲವಾದಲ್ಲಿ ನವೆಂಬರ್ 2ರ ನಂತರ ಆನ್ಲೈನ್ ಕ್ಲಾಸ್ಗಳನ್ನು ಪಡೆಯಲು ಸಾಧ್ಯವಿಲ್ಲ. ಶಾಲಾ ಕಛೇರಿ ಮತ್ತು ಬ್ಯಾಂಕ್ ಅಕ್ಟೋಬರ್ 27ರಿಂದ ತೆರೆಯುತ್ತವೆ. ದಯಮಾಡಿ ಆನ್ಲೈನ್ ಪಾವತಿ ಸೌಲಭ್ಯವನ್ನು ಬಳಸಿಕೊಳ್ಳಿ.
ಧನ್ಯವಾದಗಳು!
ಈಗಾಗಲೇ ಪಾವತಿಸಿದ್ದಲ್ಲಿ ಈ ಸಂದೇಶವನ್ನು ನಿರ್ಲಕ್ಷಿಸಿ.